Bigg Boss Kannada 5: Week 4: Ashita Chandrappa apologizes to Sudeep
ರಿಯಾಝ್ ಮಾಡಿದ್ದು ಚೀಪ್ ಎಂದ ಆಶಿತಾಗೆ ಬಿಸಿ ಮುಟ್ಟಿಸಿದ ಸುದೀಪ್! ಅಷ್ಟಕ್ಕೂ, ಜನಸಾಮಾನ್ಯ ಸ್ಪರ್ಧಿ ರಿಯಾಝ್ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದೇ ಕೆಲವರಿಗೆ ಇಷ್ಟ ಆಗಲಿಲ್ಲ. ಹೀಗಾಗಿ ರಿಯಾಝ್ ತೆಗೆದುಕೊಂಡ ನಿರ್ಧಾರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಕೂಡ ಕೆಲವರಿಗೆ ಆಕ್ಷೇಪ ಇತ್ತು. ಕ್ಯಾಪ್ಟನ್ ಆದ್ಮೇಲೆ ಹಣ್ಣುಗಳನ್ನ ಎಣಿಸಿ ರಿಯಾಝ್ ಹಂಚಿದರು. ಒಬ್ಬೊಬ್ಬರಿಗೆ ಇಷ್ಟು ಹಣ್ಣು ಹೋಗಬೇಕು ಅಂತ ಭಾಗ ಮಾಡಿದರು. ಇದು ಸೆಲೆಬ್ರಿಟಿ ಸ್ಪರ್ಧಿಗಳಿಗೆ ಇಷ್ಟ ಆಗಲಿಲ್ಲ. ಅದರಲ್ಲೂ, ನಟಿ ಆಶಿತಾಗಂತೂ ಇದು ಚೀಪ್ ಎಂದೆನಿಸಿದೆ. ರಿಯಾಝ್ ಮಾಡಿದ್ದನ್ನ ಚೀಪ್ ಅಂತ ಹೇಳುವ ಆಶಿತಾಗೆ, ಕ್ಯಾಪ್ಟನ್ ರಿಯಾಝ್ ಮಾತನ್ನ ಕೇಳಿಸಿಕೊಳ್ಳುವ ವ್ಯವಧಾನ ಕೂಡ ಇರಲಿಲ್ಲ. ಆಶಿತಾ ರವರ ಈ ಅಸಡ್ಡೆ ವರ್ತನೆ ಬಗ್ಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಬಿಸಿ ಮುಟ್ಟಿಸಿದರು.